ಖಾಲಿ ಇರುವ ಹುದ್ದೆಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದು. ಪ್ರಸ್ತುತ ವೃತ್ತನಿರತ ಶಕ್ಷಕರಿಗೆ ವಿಷಯವಾರು, ಪ್ರಾವೀಣ್ಯತೆ, ಸಾಮರ್ಥ್ಯ ವೃದ್ಧಗಾಗಿ ತರಬೇತಿಗಳನ್ನು ನೀಡುವುದು. ಹಿರಿಯ ವಿಷಯ ಪರಿಣಿತರಿಂದ ಮಾರ್ಗದರ್ಶನ,ಅಭಿಪ್ರೇರಣಾ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರನ್ನು ಹೆಚ್ಚು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾರ್ಪಡಿಸುವುದು. ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ವಿಶೇಷ ತರಬೇತಿ, ಅವಶ್ಯಕ ಸಾಮಗ್ರಿಗಳನ್ನು ಒದಗಿಸುವುದು, ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡುವುದು. ಬೇಸಿಗೆ ರಜೆಯಲ್ಲಿ ವ್ಯಕ್ತಿತ್ವ ವಿಕಸನ, ಇಂಗ್ಲೀಷ ವ್ಯಾಕರಣದ ತರಗತಿಗಳನ್ನು ನಡೆಸಲಾಗುವುದು. ಕನ್ನಡ ಮಾದ್ಯಮದ ಅನುದಾನಿತ ಶಾಲೆಯ ಮಕ್ಕಳಿಗೂ ಇಂಗ್ಲೀಷ ಜ್ಞಾನ ನೀಡಿ ಹೊರ ಪ್ರಪಂಚದ ಮುಖ್ಯವಾಹಿನಿಗೆ ತರುವ ಉದ್ದೇಶವಿದೆ.