Vanita Women Arts and Commerce P.U. College

About Vanita Women Arts and Commerce P.U. College

about img

Vanita P.U.college is started in the year 2017.The college was inaugurated by Shri Mohan Siddhanti.Principal of K.E.Boarddegree College, Dharwad. Presently there are 8 staff andmore than 50 students.

  
VISION

    • Providing quality educationto girl students.
    • Skill based education is provided  to make women self-reliant in the society.

     

     

     

Our Other Institutions

EDUCATIONAL INSTITUTIONS IN CAMPUS

  • *
    Bhagirathibai Pre-Primary School
  • *
    Vanita PrayogikSchool (Primary School)
  • *
    Vanita High School
  • *
    Vanita Women Arts and Commerce P.U. College
  • *
    VANITA TEACHER TRAINING INSTITUTE

ವನಿತಾ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ

ವನಿತಾ ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ೦೨/೦೮/೨೦೧೭ ರಂದು ಸ್ಥಾಪನೆಯಾಯಿತು. ಕೆ.ಈ.ಬೋರ್ಡ್ ಮಹಾವಿದ್ಯಾಲಯದ ಪ್ರಾಚಾರ್ಯರು ಶ್ರೀ.ಮೋಹನ ಸಿದ್ದಾಂತಿ ಅವರು ಈ ವಿದ್ಯಾಲಯವನ್ನೆ ಉದ್ಘಾಟಿಸಿದರು. ಸದ್ಯ ಸಿಬ್ಬಂದಿ ವರ್ಗದಲ್ಲಿ ಶ್ರೀ.ಆರ್.ಬಿ.ದೊಡಮನಿ ಪ್ರಾಚಾರ್ಯರು, ಶ್ರೀ.ಕೆ.ಜೆ.ಕೊಕರೆ, ಶ್ರೀ.ರಾಘವೇಂದ್ರ ನರಗುಂದ, ಕುಮಾರಿ ಅಮೃತಾ ಅಳಗವಾಡಿ, ಶ್ರೀಮತಿ.ಶುಭಾ ಪರೀಠ ಹಾಗೂ ನಾಗವೇಣಿ ಎನ್ ಮಲ್ಲಾಪುರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಲಾ ವಿಭಾಗ:- ಕನ್ನಡ, ಇಂಗ್ಲೀಷ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ವಿಷಯಗಳನ್ನು ಭೋಧಿಸಲಾಗುತ್ತಿದ್ದು ಪ್ರಸ್ತುತ ಹದಿಮೂರು ವಿದ್ಯಾರ್ಥಿನಿಯರಿದ್ದಾರೆ. ಹಾಗೆಯೇ
ವಾಣಿಜ್ಯ ವಿಭಾಗದಲ್ಲಿ:- ಕನ್ನಡ, ಇಂಗ್ಲೀಷ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಅಕೌಂಟೆನ್ಸಿ, ವ್ಯವಹಾರ ಅಧ್ಯಯನ ವಿಷಯಗಳನ್ನು ಕಲಿಸಲಾಗುತ್ತಿದೆ.
ಕರ್ನಾಟಕದಲ್ಲಿಯೇ ವಿದ್ಯಾಕಾಶಿಯೆಂದು ಪ್ರಸಿದ್ಧವಾದ ಧಾರವಾಡದಲ್ಲಿ ವನಿತಾ ಸೇವಾ ಸಮಾಜದ ಸ್ಥಾಪಕರಾದ ಶ್ರೀಮತಿ ಭಾಗೀರಥಿಬಾಯಿಯವರ ಆಶಯದಂತೆ ಮಹಿಳಾ ಸಬಲೀಕರಣದ ಉದ್ದೇಶದಿಂದ ೧೯೫೨ರಲ್ಲಿ ಸ್ಥಾಪನೆಗೊಂಡ ವನಿತಾ ಶಿಕ್ಷಕಿಯರ ತರಬೇತಿ ಸಂಸ್ಥೆಯು ಸಾವಿರಾರು ವಿದ್ಯಾರ್ಥಿನಿಯರಿಗೆ ಜ್ಞಾನದ ಮತ್ತು ಬಾಳಿನ ಬೆಳಕಾಗಿದೆ. ಉತ್ತರ ಕರ್ನಾಟಕದಲ್ಲಿ ಆಗಿನ ಕಾಲದಲ್ಲಿ ಮಹಿಳಾ ವಿದ್ಯಾಭ್ಯಾಸಕ್ಕೆ ಪ[ರೋತ್ಸಾಹ ನೀಡುತ್ತಿದ್ದ ಏಕೈಕ ಸಂಸ್ಥೆಯಂದು ಹೇಳಲಿಕ್ಕೆ ಹೆಮ್ಮೆ ಎನಿಸುತ್ತದೆ.
ಇಲ್ಲಿ ಕಲಿತ ವಿದ್ಯಾರ್ಥಿನಿಯರು ತರಬೆತಿ ಪಡೆದು ಕರ್ನಾಟಕದಾದ್ಯಂತ ಸೇವೆ ಸಲ್ಲಿಸುತ್ತಿದ್ದು ಇದು ಸಂಸ್ಥೆಯ ಗುಣಾತ್ಮಕ ಬೋಧನೆಗೆ ಕೈಗನ್ನಡಿಯಾಗಿದೆ.
ಪ್ರಾರಂಭದಲ್ಲಿ ಟಿ.ಸಿ.ಎಲ್.ನಿಂದ ಪ್ರಾರಂಭವಾಗಿ ನಂತರ ಟಿ.ಸಿ.ಎಚ್.ಎಂದು ಪರಿವರ್ತಿತವಾಗಿ ನಂತರದ ದಿನಗಳಲ್ಲಿ ಡಿ.ಇಡಿ.ಎಂದು ಪುನರ್ನಾಮಕರಣಗೊಂಡ ಪ್ರಸ್ತುತ ಡಿ.ಎಲ್.ಇ.ಡಿ.ಎಂದು ತರಬೇತಿ ನೀಡುತಿದ್ದು, ದ್ವಿತೀಯ ವರ್ಷ ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿನಿಯರು ಈ ತರಬೇತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಇಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರು ಉದ್ಯೋಗ ಪಡೆದಿರುವುದು ಸಂಸ್ಥೆಯ ಗರಿಮೆಯ ವಿಚಾರವಾಗಿದೆ.
ಈ ತರಬೇತಿ ಕೇಂದ್ರವನ್ನು ಎನ್.ಸಿ.ಟಿ.ಇ ನಿರ್ದೇಶನದಂತೆ ಶಿಕ್ಷಕರ ಶಿಕ್ಷಣ ೨೦೦೬ ರಿಂದ ತರಬೇತಿ ಶಿಕ್ಷಕರ ವಿದ್ಯಾರ್ಹತೆಯನ್ನು ಎಮ್.ಇಡಿ. ಎಂದು ಉನ್ನತಿಕರಿಸಿ ಉತ್ತಮ ಕಲಿಕೆಗೆ ದಾರಿ ನೀಡಿದ್ದು ವಿಶೇಷ. ಪ್ರಾರಂಭದಿಂದ ಶ್ರೀ ಸಿ.ಎಸ್.ಕುಲಕರ್ಣಿ ಅಧೀಕ್ಷಕರಾಗಿ ನಂತರ ಶ್ರೀಮತಿ ಆರ್.ವಿಮಲ್ ಮೇಡಂ, ಶ್ರೀ ಎಲ್.ಆಯ್.ತೊಗ್ಗಿ ನಂತರ ಪ್ರಾಚಾರ್ಯರಾಗಿ ಶೀ ವಿ.ವಿ.ಕುರಿಯವರ, ಶ್ರೀ ಎಸ್.ಎಸ್. ಮಳಗಿ ಹಾಗೂ ಪ್ರಸ್ತುತ ವರ್ಷದಲ್ಲಿ ಶ್ರೀ ಪ್ರಕಾಶ ಎಸ್.ಸಿದ್ದಕ್ಳವರ ಇವರು ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

We are Happy to Say