About Us

About Vanita Seva Samaj

about img

Vanita Seva Samaj was established with the selfless efforts of Smt.BhagirathibaiPuranik,known as “Mayi”.  According to the name of institution ‘VanitaSeva Samaj’ is the serving the poor, orphans, unprivileged, exploited women. Vanita Seva Samaj was started in the year 1928. “Mayi” understood the problems and pains of women in the society. She gathered such women, gave shelter, education and trainings so that the women should become self -reliant, tolead her life.
 For her wonderful job, she was honoured Kaiser-E-Hind by thethen Bombaygovernment in the year 1935.
  The service message reached to many people and dignitaries visited the Vanita Seva Saj includes- Prime Minister Pt. Jawaharlal  Nehru , Smt. Indira Gandhi, Chief Minister Shri. S. Nijalingappa, CentralMinisters andGovernors of Bombay.
            The Vanita Seva Samajinitially started in a rented room in Dharwad with 25 training courses.  It provided education for girls, along with dance, music, drama, tailoring, weaving, printing, preparing household goods, Home Science. A maternity hospital was also there in thepremises.  At that time there were Balwadi, Primary,Secondary, TCHcollege.
Presently it has Kindergarten, Primary, High school, P.U.College and D.EL.Ed.Colleges arerunning with more than 500 students, getting good quality of education and also professional training.
            Now theinstitution iscompleting 90 years of yeoman service to the society and women in particular. In 2028, it iscelebrating hundred years. The Management has plans to construct new building andrestart previous training courses.

Our Other Institutions

EDUCATIONAL INSTITUTIONS IN CAMPUS

  • *
    Bhagirathibai Pre-Primary School
  • *
    Vanita PrayogikSchool (Primary School)
  • *
    Vanita High School
  • *
    Vanita Women Arts and Commerce P.U. College
  • *
    VANITA TEACHER TRAINING INSTITUTE

ವನಿತಾ ಸೇವಾ ಸಮಾಜ ಕುರಿತು

ದಿವಂಗತ ಭಾಗೀರಥಿಬಾಯಿ ಪುರಾಣಿಕರ ಪರಿಶ್ರಮದ ಫಲಪುಷ್ಪವೇ ವನಿತಾ ಸೇವಾ ಸಮಾಜ. ಹೆಸರಿಗೆ ತಕ್ಕಂತೆ ಬಡ, ಅನಾಥ, ಹಾಗೂ ದುರ್ಬಲ ವರ್ಗದ, ಶೋಷಿತ ಹೆಣ್ಣು ಮಕ್ಕಳಿಗೆ ಆಧಾರ ಸ್ತಂಭವಾಗಿರುವ ವನಿತೆಯರಿಗಾಗಿಯೇ ಇರುವ ವನಿತಾ ಸೇವಾ ಸಮಾಜ ಪ್ರಾರಂಭವಾದದ್ದು ೧೯೨೮ ರಲ್ಲಿ ಒಂದು ಹೆಣ್ಣೇ ಇನ್ನೊಂದು ಹೆಣ್ಣಿನ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಅಂತೆಯೇ ತಮ್ಮ ಸ್ವಂತ ಬದುಕಿನಲ್ಲಿ ತುಂಬ ನೊಂದಿದ್ದ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕರು ತಮ್ಮ ಶ್ರೇಷ್ಠ ವಿಚಾರಗಳಿಂದ ದೃಢ ನಿರ್ಧಾರದಿಂದ ಸತತ ಪ್ರಯತ್ನಗಳಿಂದ, ತ್ಯಾಗ, ಸಹನೆ, ಸಹಾಯ ಮನೋಭಾವದಿಂದಾಗಿ ಇತರ ಮಹಿಳೆಯರ ಬಾಲಿಗೆ ಭಾಗ್ಯ ತೆರೆಸುವ ಭಾಗ್ಯದಾಯಿನಿಯಾದವರು, ಭಾಗೀರಥಿ ನದಿಯಂತೆಯೇ ತಮ್ಮ ಜೀವನವನ್ನು ಪವಿತ್ರ, ಪಾವನ ಫಲಪ್ರದವಾಗಿ ಮಾಡಿದ ಮಾಯಿ ಭಾಗೀರಥಿಬಾಯಿ ಪುರಾಣಿಕರು.
ಕೈಸರ್-ಇ-ಹಿಂದ್ ಪ್ರಶಸ್ತಿ ಪುರಸ್ಕೃತೆ ನಮ್ಮ ಮಾಯಿ ಅವರ ಈ ವನಿತಾ ಸೇವಾ ಸಮಾಜದ ಕಾರ‍್ಯ ಪರಿಗಣಿಸಿ, ದೇಶದ ಪ್ರಧಾನಿ ಜವಾಹರಲಾಲ ನೆಹರು, ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಎಸ್.ನಿಜಲಿಂಗಪ್ಪ, ಜಾರ್ಜ್ ಫರ್ನಾಂಡಿಸ್, ಮುಂತಾದವರು ಈ ಸಂಸ್ಥೆಗೆ ಭೇಟಿ ನೀಡಿದ್ದರು.
ಖ್ಯಾತ ಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆಯವರು ವನಿತಾ ಸೇವಾ ಸಮಾಜದ ಖಾಯಂ ಸದಸ್ಯರಾಗಿದ್ದರು. ಇಲ್ಲಿನ ಕಾರ್ಯಕ್ರಮಗಳ ಪೌರೋಹಿತ್ಯವನ್ನು ವಹಿಸುತ್ತಿದ್ದರು.
೧೯೨೮ರಲ್ಲಿ ಭಾಡಿಗೆ ಕೋಣೆಯಿಂದ ಪ್ರಾರಂಭವಾದ ವನಿತಾ ಸೇವಾ ಸಮಾಜ ಮಾಯಿಯವರ ಪ್ರೀತಿ ಮತ್ತು ಶ್ರಮದ ಪ್ರತೀಕವಾಗಿ ಹೆಣ್ಣುಮಕ್ಕಳು ಸ್ವಾವಲಂಬಿ ಬದುಕನ್ನು ನಡೆಸುವಂತಾಗಿ ೨೫ ತರಬೇತಿ ಕೇಂದ್ರಗಳಿಂದ ಕೂಡಿ ಧಾರವಾಡದಲ್ಲಿಯೇ ವಿಜ್ರಂಭಣೆಯಿಂದ ಮೆರೆದ ಕಾಲವಿತ್ತು. ನೂರಾರು ನಿರ್ಗತಿಕ, ಬಡ ಹೆಣ್ಣು ಮಕ್ಕಳಿಗೆ, ಶಿಕ್ಷಣ, ಸಂಗೀತ, ನ್ರತ್ಯ, ಸಂಸ್ಕ್ರತ ನಾಟಕ, ಹೊಲಿಗೆ, ನೇಯ್ಗೆ, ಮುದ್ರಣ, ವಿವಿಧ ವಸ್ತುಗಳ ತಯಾರಿಕೆ, ಆಸ್ಪತ್ರೆ ಮುಂತಾದವುಗಳ ಬಗ್ಗೆ ತರಬೇತಿ ನೀಡಿ ಮಹಿಳೆಯರು ಸ್ವಾವಲಂ ಬಿಗಳಾಗಿ ಬದುಕಲು ಕಲಿಸಿ ಕೊಟ್ಟಿದೆ. ಈಗಲೂ ವನಿತಾ ಸೇವಾ ಸಮಾಜ ಮಹಿಳೆಯರಿಗಾಗಿ ಗುಣಮಟ್ಟದ ಶಿಕ್ಷಣ ಮತ್ತು ಅದರೊಂದಿಗೆ ವ್ರತ್ತಿಪರ ಶಿಕ್ಷಣ ನೀಡಿ ಮಾಯಿಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಸತತ ಶ್ರಮಿಸುತ್ತಿದೆ. ಈಗ ಸದ್ಯ ಬಾಲವಾಡಿ, ಪ್ರಾಥಮಿಕ, ಮಾಧ್ಯಮಿಕ, ಪಿ,ಯು, ಮಹಾ ವಿದ್ಯಾಲಯ, ಡಿ.ಇಡಿ.ಕಾಲೇಜುಗಳಲ್ಲಿ ೫೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅನೇಕ ತರಬೇತಿಗಳನ್ನು ನೀಡುತ್ತಿದೆ.
ಯೋಜನೆ;- ಸದ್ಯ ೯೦ ವರ್ಷ ಪೂರೈಸಿ ಮುಂದಿನ ೨೦೨೮ ಕ್ಕೆ ಶತಮಾನೋತ್ಸವ ಆಚರಿಸಲಿರುವ ವನಿತಾ ಸೇವಾ ಸಮಾಜ ಮುಂದಿನ ೧೦ ವರ್ಷಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಹಿಂದಿದ್ದ ತರಬೇತಿ ಕೇಂದ್ರಗಳ ಪುನರ್ ಸ್ಥಾಪನೆ ಇತ್ಯಾದಿಗಳ ಮೂಲಕ ಭಾಗೀರಥಿಬಾಯಿರವರ ಉದ್ದೇಶ ಈಡೇರಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.

We are Happy to Say